ವಿ.ವಿ ಕುರಿತು

ವಿ.ವಿ ಕುರಿತು

ವಿಶ್ವವಿದ್ಯಾಲಯದ ಬಗ್ಗೆ

ದೃಷ್ಟಿ (Vision)
ಸಂಗೀತ ಮತ್ತು ಪ್ರದರ್ಶಕ ಕಲೆಗಳು ಬದುಕು ಮತ್ತು ಜೀವನೋಪಾಯಕ್ಕೆ ಒದಗುವ ಸವಾಲನ್ನು ಸ್ವೀಕರಿಸಿ ಸಂಗೀತ ಮತ್ತು ಪ್ರದರ್ಶಕ ಕಲೆಗಳನ್ನು ಕಲಿಯುವವರ ಮತ್ತು ಆಸಕ್ತರಿಗೆ ಆಸರೆಯನ್ನೊದಗಿಸುವುದು ಮುಖ್ಯ ಗುರಿಯಾಗಿದೆ. ಹಾಗೆ ಮಾಡುವ ಮೂಲಕ ಈ ವಿದ್ಯೆ ರಾಜ್ಯದಲ್ಲಿ ಮತ್ತು ರಾಷ್ಟ್ರದಲ್ಲಿ ಜ್ಞಾನದ ಮುಖ್ಯ ಪ್ರವಾಹದಲ್ಲಿ ಸಂಗೀತ ಮತ್ತು ಪ್ರದರ್ಶಕ ಕಲೆಗಳು ಸೇರ್ಪಡೆಯಾಗುವುದನ್ನು ಸಾಕ್ಷಾತ್ಕರಿಸುವುದು.

ಗುರಿ (Mission)
ಪಾರಂಪರಿಕ ಕಲೆಗಳು ಮತ್ತು ಕರ್ನಾಟಕದ ಉಳಿದೆಲ್ಲಾ ಅಮೂರ್ತ ಪರಂಪರೆಯ ಜ್ಞಾನ ದ್ರವ್ಯಗಳ ಸಂಗೀತ ಮತ್ತು ಪ್ರದರ್ಶಕ ಕಲೆಗಳು ನಮ್ಮ ಪಾರಂಪರಿಕ ಜ್ಞಾನ ವ್ಯವಸ್ಥೆಯ ಅನಘ್ರ್ಯ ಭಂಡಾರವಾಗಿದೆ. ಹಾಗಾಗಿ, ಶೈಕ್ಷಣಿಕ ಸಂಸ್ಕಾರಕ್ಕೆ ಒಗ್ಗುವ ವಿಶಿಷ್ಟ ಸಾಂಸ್ಕøತಿಕ ಆಯಾಮ ಇವುಗಳಿಗಿರುವುದು ಸರ್ವ ವೇದ್ಯ ಆದುನಿಕ ದಾಖಲೀಕರಣದ ತಂತ್ರಗಳ ಮೂಲಕ ವಿಶಾಲ ಸಮಾಜದ ಸದಸ್ಯರುಗಳನ್ನು ತಲುಪುವುದು ಜರೂರಿನ ಸಂಗತಿಯಾಗಿದ್ದು ಅದನ್ನು ಆದ್ಯತೆಯ ಮೇರೆಗೆ ಕೈಗೆತ್ತಿಕೊಳ್ಳಬೇಕಾಗಿದೆ.

ಈ ಕಲೆಗಳನ್ನು ಪ್ರದರ್ಶನಗಳ ಮೂಲಕ ವಿಶಾಲ ಸಮಾಜಕ್ಕೆ ತಲುಪಿಸುವ ಜರೂರಿರುವುದರಿಂದ ವ್ಯವಸ್ಥಿತವಾದ ಜನಾಂಗೀಯ ಹಾಗೂ ಅಂತರ್-ಸಾಂಸ್ಕøತಿಕ ಅಧ್ಯಯನವೂ ಆಗಬೇಕಾಗಿದೆ. ಈ ಬೃಹತ್ ಯೋಜನೆಯನ್ನು ಸಾಕಾರಗೊಳಿಸಲು ಸಾಧ್ಯವಾಗುವುದು ಒಂದು ವಿಶ್ಯವಿದ್ಯಾಲಯದಂಥ ದೊಡ್ಡ ಸಂಸ್ಥೆಗೆ ಮಾತ್ರ. ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದದ್ದು ‘’ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ’’. ವಿಶಾಲ ಸಮಾಜದೊಂದಿಗೆ ಈ ಕ್ಷೇತ್ರದ ಪರಿಣತರು ನಿರಂತರವಾಗಿ ಸಂವಾದದಲ್ಲಿ ತೊಡಗಿ ಬೌದ್ದಿಕ ವಿಕಾಸಕ್ಕೆ ನೆರವಾಗಬೇಕೆನ್ನುವ ದೂರದೃಷ್ಟಿಯಿಂದ ಸಂಶೋಧನೆ, ದಾಖಲೀಕರಣ ಮತ್ತು ಸಂರಕ್ಷಣೆ ಮಾಡುವ ಉದ್ದೇಶದಿಂದಲೆ ನಮ್ಮ ವಿಶ್ವವಿದ್ಯಾಲಯ ಅಸ್ತಿತ್ವಕ್ಕೆ ಬಂದಿದೆ.

ಒಟ್ಟು ನೋಟ
ಜ್ಞಾನದ ಕಾರಂಜಿಯಾಗಬೇಕೆಂಬ ಮಹÀದಾಸೆಯಿಂದಲೇ ಮೈತಳೆದ ವಿಶ್ವವಿದ್ಯಾಲಯ ನಮ್ಮ ವಿಶಾಲ ಸಮಾಜವನ್ನು ಜ್ಞಾನದೀವಿಗೆಯಿಂದ ಬೆಳಗಬೇಕೆಂಬುದೇ ಇದರ ಗುರಿಯಾಗಿದೆ. ಈ ದೃಷ್ಟಿಯಿಂದ ಗಮನಿಸುವಾಗ ‘’ನಹಿ ಜಾÐನೇನ ಸದೃಶಂ’’ (ಜ್ಞಾನಕ್ಕೆ ಸಮನಾದುದು ಯಾವುದೂ ಇಲ್ಲ) ಎಂಬ ಆರ್ಷೇಯ ನುಡಿಯಲ್ಲಡಗಿದ ಸತ್ಯ ಮನದಟ್ಟಾಗುತ್ತದೆ. ಜನಸ್ತೋಮಕ್ಕೆ ಬಲ ನೀಡುವುದೇ ಜ್ಞಾನ; ಜ್ಞಾನದ ಮೂಲಕ ಅವರು ಉತ್ತಮ ಮಾನವರಾಗುತ್ತಾರೆ.

ಅದೇ ರೀತಿ ಸಂಗೀತವು ಸಹ ಅದು ಸ್ವರ್ಗೀಯವಾದದ್ದು ಎಂದು ಕರೆಸಿಕೊಂಡಿದೆಯಾದರೂ ಸಂಗೀತವನ್ನು ಮತ್ತು ಶ್ರೋತೃಗಳನ್ನು ಅದು ಘನವಂತರನ್ನಾಗಿಸುತ್ತದೆ. ವ್ಯಕ್ತಿಗಳ ವಕ್ರತೆಯನ್ನು ಇಲ್ಲವಾಗಿಸಿ ಅವರನ್ನು ಉನ್ನತ ಸ್ತರಕ್ಕೆ ಎತ್ತರಿಸುವಂತ ಶಕ್ತಿ ಸಂಗೀತಕ್ಕಿದೆ. ಕೇವಲ ಮನುಷ್ಯರನ್ನಲ್ಲದೆ ಸಸ್ಯ ಹಾಗು ಪ್ರಾಣಿವರ್ಗವನ್ನೂ ಸಂಗೀತ ಪ್ರಬಾವಿಸಬಲ್ಲದು ಎಂಬ ನಂಬಿಕೆ ಜನಜನಿತವಾಗಿದೆ. ಯಾವುದೇ ಸಂಗೀತ ಪ್ರಕಾರದ ಮೇಲೆ ಪ್ರಭುತ್ವ ಸಾಧಿಸಲು ಏಕಾಗ್ರತೆಯಿಂದ ಕೂಡಿದ ಸುಧೀರ್ಘ ಸಾಧನೆಯ ಅವಶ್ಯಕತೆಯಿದೆ. ಆ ಅನ್ವೇಷಣೆಯನ್ನು ‘ಉಪಾಸನೆ/ಸಾಧನೆ’ ಎನ್ನುತ್ತಾರೆ; ಹಾಗೆಯೆ ಅಂಥ ಸಾಧಕರನ್ನು ‘ಉಪಾಸಕÉ/ಸಾಧಕ’ ಎಂದು ಕರೆಯುತ್ತಾರೆ; ಸಾಧಕನೆಂದರೆ ಪರಮ ಸತ್ಯದ ಅನ್ವೇಷಕ ಎಂದರ್ಥ. ಸಂಗೀತ ಕಲಿಸುವ ಮೂರು ಮುಖ್ಯ ಉನ್ನತ ಗುರಿಗಳೆಂದರೆ ಸತ್ಯ, ಸೌಂದರ್ಯ ಮತ್ತು ದೈವತ್ವ/ ಭವ್ಯತೆಯ ಸಾಕ್ಷಾತ್ಕಾರ. ನೃತ್ಯ, ನಾಟಕ, ಗಮಕ, ಬೊಂಬೆಯಾಟ, ಯಕ್ಷಗಾನ, ಇತ್ಯಾದಿ ಪ್ರದರ್ಶಕ ಕಲೆಗಳೆಲ್ಲದರ ಗುರಿಯೂ ಇದೆ ಆಗಿದೆ. ಈ ಎಲ್ಲಾ ಕಲೆಗಳು ಇವುಗಳಲ್ಲಿ ಪರಿಣಿತರಾದ ಕಲಾವಿದರ ಪ್ರತಿಭೆ ಮತ್ತು ಕೌಶಲ್ಯಗಳನ್ನು ಪ್ರದರ್ಶಿಸಲು ಅವಕಾಶವನ್ನು ನೀಡುತ್ತವೆ, ಅಷ್ಟೆ ಅಲ್ಲ ಜನಸಾಮಾನ್ಯರು ಅವುಗಳನ್ನು ವೀಕ್ಷಿಸಿ ಸಂತೋಷ ಪಡೆಯುವಂತೆ ಮಾಡುತ್ತವೆ. ಅನೇಕ ವಿಧಗಳಲ್ಲಿ ನಮ್ಮದು ವೈವಿದ್ಯತೆಯ ಆಗರ. ಸಂಗೀತ ಮತ್ತು ಇತರ ಪ್ರದರ್ಶಕ ಕಲೆಗಳ ಮಟ್ಟಿಗೂ ಈ ಮಾತು ನಿಜ.

ಸ್ಥೂಲವಾಗಿ ಹೇಳುವುದಾದರೆ ಸಂಗೀತದಲ್ಲಿ ಎರಡು ಬಗೆಗಳಿವೆ, ಒಂದು ಹಿಂದುಸ್ತಾನಿ ಅಥವಾ ಉತ್ತರಾದಿ ಇನ್ನೊಂದು ದಕ್ಷಿಣಾದಿ ಅಥವಾ ಕರ್ನಾಟಕ. ಈ ಪ್ರಭೇದೆಗಳ ನಡುವೆ ಇರುವ ತಾಂತ್ರಿಕವಾದ ಜಿಟಿಲ ವಿಷಯಗಳನ್ನು ಪ್ರಶ್ನಿಸದೆ ಹೇಳಬಹುದಾದರೆ ಹಿಂದುಸ್ತಾನಿ ಸಂಗೀತವಾಗಲಿ, ಕರ್ನಾಟಿಕ ಸಂಗೀತವಾಗಲಿ ಎರಡು ಸಮ ಶಿಖರಗಳಾಗಿವೆ.
ಕರ್ನಾಟಕ ಸಂಗೀತ ಈ ಎರಡೂ ಶಾಖೆಗಳನ್ನು ತನ್ನಲ್ಲಿ ವಿಲೀನಗೊಳಿಸಿಕೊಂಡಿರುವುದು ಹೆಮ್ಮೆಯ ವಿಷಯ. ಕರ್ನಾಟಕದ ಕುವರಿ ದಿವಂಗತ ಡಾ. ಗಂಗೂಬಾಯಿ ಹಾನಗಲ್ ಅವರು ಹಿಂದುಸ್ತಾನಿ ಗಾಯನ ಕ್ಷೇತ್ರದಲ್ಲಿ ಅತ್ಯುನ್ನತ ಮಟ್ಟವನ್ನು ಮುಟ್ಟಿ ಕೇವಲ ಕರ್ನಾಟಕದಲ್ಲಷ್ಟೇ ಅಲದ್ಲೆ ದೇಶದ ಉದ್ದಗಲಕ್ಕೂ ಪ್ರಪಂಚದ ಹಲವು ರಾಷ್ಟ್ರಗಳಲ್ಲಿಯೂ ಕೀರ್ತಿವಂತರಾಗಿದ್ದರು.

ಅಂಥ ಮೇರು ಸದೃಶ ಸಂಗೀತಗಾರ್ತಿಯ ಹೆಸರನ್ನು ಚಿರಸ್ಥಾಯಿಗೊಳಿಸಲು ಕರ್ನಾಟಕದ ಘನ ಸರ್ಕಾರ ಸಂಗೀತ ಮತ್ತು ಇತರ ಪ್ರದರ್ಶಕ ಕಲೆಗಳಿಗಾಗಿ ಒಂದು ಪ್ರತ್ಯೇಕ ವಿಶ್ವವಿದ್ಯಾಲಯವನ್ನು ಸ್ಥಾಪಿಸಿ ಆ ವಿಶ್ವವಿದ್ಯಾಲಯಕ್ಕೆ ಡಾ. ಗಂಗೂಬಾಯಿ ಹಾನಗಲ್ ಅವರ ಹೆಸರನ್ನಿಟ್ಟುದು ಆ ಮಹಾನ್ ಸಾಧಕರಿಗೆ ಸಲ್ಲಿಸಬಹುದಾದ ಯುಕ್ತ ಗೌರವವಾಗಿದೆ.
ಅಂತೆಯೇ ರಾಜ್ಯದ ಶಾಸಕಾಂಗ ವಿಶೇಷ ಕಾಯಿದೆಯ ಮೂಲಕ 2008-09 ರಲ್ಲಿ “ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ಅಸ್ಥಿತ್ವಕ್ಕೆ ಬಂದಿತು. ವಿಶ್ವವಿದ್ಯಾಲಯ ಸಂಸ್ಥಾಪನೆಯಾಗಿ ಉನ್ನತ ಗುರಿಗಳನ್ನು ಈಡೇರಿಸುವ ದಿಶೆಯಲ್ಲಿ ವಿಶ್ವವಿದ್ಯಾಲಯ ನಿರಂತರ ಪ್ರಯತ್ನ ಮಾಡುತ್ತಾ ಮುನ್ನಡೆಯುತ್ತಿದೆ. ಇನ್ನೊಂದು ಮುಖ್ಯ ಸಂಗತಿಯನ್ನು ನಾವಿಲ್ಲಿ ಗಮನಿಸಬೇಕು. ಒಬ್ಬ ವ್ಯಕ್ತಿಯ ಜೀವನದಲ್ಲೇ 8-9 ವರ್ಷಗಳ ಅವದಿ ಅಲ್ಪ ಸಮಯ ಎನ್ನಿಸಿರುವಾಗ ಒಂದು ಬೃಹತ್ ಸಂಸ್ಥೆಯಾದ ವಿಶ್ವವಿದ್ಯಾಲಯದ ಮಟ್ಟಿಗೆ ಇದು ತೀರಾ ಅಲ್ಪಕಾಲವೆನ್ನಬೇಕು. ಸಮಾಜದ ಮೇಲೆ ವಿಶ್ವವಿದ್ಯಾಲಯ ತನ್ನನ್ನು ಸ್ಪಷ್ಟವಾದ ರೀತಿಯಲ್ಲಿ ಮುದ್ರೆಯನ್ನೊತ್ತಬೇಕಾದರೆ ಇನ್ನು ಸಾಕಷ್ಟು ಸಮಯ ಬೇಕು. ಈ ಸಂಗತಿಗಳನ್ನು ಮನಸ್ಸಿನಲ್ಲಿಟ್ಟುಕೊಂಡು ನಾವು ವಿಶ್ವವಿದ್ಯಾಲಯವನ್ನು ಅರ್ಥಮಾಡಿಕೊಳ್ಳಬೇಕಾಗುತ್ತದೆ.
ವಿಶ್ವವಿದ್ಯಾಲಯದ ಮೂಲಭೂತ ಗುರಿಗಳು:

  1. ಸಂಗೀತದ ಬೋದನೆ ಮತ್ತು ಕಲಿಕೆಯನ್ನು ಅದರ ಶುಧ್ದ ರೂಪದಲ್ಲಿ ಭೋದಿಸುವುದು ಮತ್ತು ಕಲಿಸುವುದನ್ನು ಮತ್ತೆ ಶುರುಮಾಡುವುದು.
  2. ಸಾಮಾಜಿಕರಲ್ಲಿ ಸಂಗೀತ ಮತ್ತು ಇತರ ಪ್ರದರ್ಶಕ ಕಲೆಗಳ ಘನತರ ಪರಿಣಾಮಗಳ ಬಗ್ಗೆ ಅರಿವು ಮೂಡಿಸಿ ಅವರ ಬದುಕು ಸುಂದರ ಎನ್ನುವಂತೆ ಮನಸ್ಸನ್ನು ಅಭಿವಿನ್ಯಾಸಗೊಳಿಸುವುದು.
  3. ‘ಮೂಲ’ ಮೌಲ್ಯಗಳಿಗೆ ಧಕ್ಕೆಯಾಗದ ರೀತಿ ವರ್ತಮಾನದ ನೀರಿಕ್ಷೆಗಳಿಗನುಗುಣವಾಗಿ ಕಲಿಕಾ ಮತ್ತು ಭೋಧನಾ ಪ್ರಕ್ರಿಯೆಯನ್ನು ನವವಿನ್ಯಾಸದೊಂದಿಗೆ ಹೊಸದಾಗಿ ರೂಪಿಸುವುದು.
  4. ಆಧುನಿಕ ತಂತ್ರಜ್ಞಾನವನ್ನು ಸಂಗೀತ ಮತ್ತು ಇತರ ಪ್ರದರ್ಶಕ ಕಲೆಗಳ ಜ್ಞಾನವನ್ನು ಸಮಾಜಕ್ಕೆ ನಿಲುಕುವ ಮತ್ತು ಅದಕ್ಕೆ ಒಪ್ಪಿತವಾಗುವ ರೀತಿ ಬಳಸುವುದು.
  5. ಸಾಂಸ್ಕøತಿಕ ವ್ಯವಸ್ಥೆಯ ಮೂಲಕ ಸುವ್ಯವಸ್ಥಿತವಾಗಿ ಹಾಗೂ ವೈಜ್ಞಾನಿಕವಾಗಿ ಸಂಗೀತ ಪ್ರದರ್ಶಕ ಕಲೆಗಳನ್ನು ಲಭ್ಯಗೊಳಿಸುವ ರೀತಿ ಮೂಲ ರಚನೆಯನ್ನು ಸೃಷ್ಟಿಸುವುದು.

ಈ ಉದ್ದೇಶಗಳ ಈಡೇರಿಕೆಗಾಗಿ ವಿಶ್ವವಿದ್ಯಾಲಯ ಸಮರ್ಪಕವಾಗಿ ವಿನ್ಯಾಸಗೊಳಿಸಿದ ಕೋರ್ಸುಗಳ ಮೂಲಕ ಶೈಕ್ಷಣಿಕ ತರಬೇತಿಯನ್ನು ನೀಡುತ್ತದೆ. ಆ ಕೋರ್ಸುಗಳೆಂದರೆ: ಬಿ.ಎ. ಸಂಗೀತ, ಬಿ.ಎ. ನಾಟಕ, ಬಿ.ಎ. ನೃತ್ಯ, ಎಂ.ಎ ಸಂಗೀತ, ಎಂ.ಎ. ನಾಟಕ, ಎಂ.ಎ. ನೃತ್ಯ ಮತ್ತು ಇತರ ಜಾನಪದ ಕಲೆಗಳಲ್ಲಿ ಈಗ ಹೆಸರಿಸಿದ ಕೆಲವು ಕೋರ್ಸುಗಳಲ್ಲಿ ಡಿಪ್ಲೊಮಾ ಶಿಕ್ಷಣವನ್ನು ನೀಡುತ್ತಿದ್ದು ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪ್ರವೇಶಾತಿ ಪಡೆದು ಜ್ಞಾನವಿಸ್ತರಣೆ ಮಾಡಿಕೊಳ್ಳಲಿ ಎಂಬ ಸದುದ್ದೇಶವನ್ನು ಹೊಂದಲಾಗಿದೆ.

ಭಾರತ ಸಂಗೀತ ಇತ್ಯಾದಿ ಕಲೆಗಳ ಭಂಡಾರವೆಂದು ಪ್ರಸಿದ್ಧಿ ಪಡೆದಿದೆ. ಸಂಗೀತ ಪ್ರಪಂಚದಲ್ಲಿ ದಿಗ್ಗಜರು ಎನಿಸಿಕೊಂಡವರ ಒಂದು ಪಡೆಯೇ ಇದೆ. ತಾನ್‍ಸೇನ್, ಸದಾನಂದ್ ಬುವಾ, ಮಲ್ಲಿಕಾರ್ಜುನ್ ಮನ್ಸೂರು, ಪಂ. ಬಸವರಾಜ ರಾಜಗುರು, ಪಂ. ಪಂಚಾಕ್ಷಾರಿ ಗವಾಯಿ, ಪಂ. ಭೀಮಸೇನ್ ಜೊಷಿ, ಡಾ. ಗಂಗೂಬಾಯಿ ಹಾನಗಲ್, ಶ್ರೀಮತಿ ಎಂ.ಎಸ್.ಸುಬ್ಬಲಕ್ಷ್ಮಿ ಮುಂತಾದವರನ್ನು ನೆನೆಯಬೇಕಾಗುತ್ತದೆ. ಹಾಗೆಯೆ ಡಾ. ಲತಾಮಂಗೇಶ್ಕರ್, ಆಶಾಭೋಂಸ್ಲೆ, ಮಹಮ್ಮದ್ ರಫಿ, ಮುಖೇಶ್, ಹೇಮಂತ್ ಕುಮಾರ್, ಮನ್ನಾ ಡೇ, ಕಿಶೊರ್‍ಕುಮಾರ್-ಇವರೆಲ್ಲಾ ಸಿನಿಮಾ ಪ್ರಪಂಚದಲ್ಲಿ ಗಾಯಕರಾಗಿ ಪ್ರಸಿದ್ಧರು. ವಾದಕರಲ್ಲಿ ಉನ್ನತ ಶಿಖರವನ್ನು ಮುಟ್ಟಿದ ಕೆಲವರನ್ನು ನೆನೆಯಬಹುದಾದರೆ: ಉಸ್ತಾದ್ ಬಿಸ್ಮಿಲ್ಲಾ ಖಾನ್, ಪಂ. ರವಿಶಂಕರ್, ಉಸ್ತಾದ್ ಅಮ್ಮದ್ ಅಲಿ ಖಾನ್, ಉಸ್ತಾದ್ ಜಾಕೀರ್ ಹುಸೇನ್, ಪಂ-ಶಿವಕುಮಾರ್ ಶರ್ಮ, ಡಾ.ಯು.ಶ್ರೀನಿವಾಸ್, ವೀಣೆ ಶೇಷಣ್ಣ, ಪಟೀಲು ಚೌಡಯ್ಯ, ಪಂ. ಹರಿಪ್ರಸಾದ್ ಚೌರಾಸಿಯಾ, ಪಂ.ಪನ್ನಾಲಾಲ್ ಘೋಷ್, ಪಂ. ಟಿ.ಆರ್.ಮಹಾಲಿಂಗಂ, ಮುಂತಾದವರು.

ಒಟ್ಟಾರೆ ನಮ್ಮ ಆಕಾಂಕ್ಷೆ ಇರುವುದು ಸಂಗೀತ ಮತ್ತು ಇತರ ಪ್ರದರ್ಶಕ ಕಲೆಗಳ ಮೂಲಕ ಭಾರತದ ಗತ ಭವ್ಯತೆಯನ್ನು ಮತ್ತೆ ಸ್ಥಾಪಿಸುವುದು. ಜಾಗತೀಕರಣದ ಹೋಡೆತದಿಂದಾಗಿ ಈ ಅನೇಕ ಕಲೆಗಳು ಕಂಗೆಟ್ಟಿವೆ ಮತ್ತು ಮೂಲ ಪ್ರೌಢತೆಗಳನ್ನು ಇಲ್ಲವಾಗಿಸಿಕೊಂಡು ಮೇಲು ಮೇಲಿನ ಮಟ್ಟದಲ್ಲಿ ತೇಲಾಡತೊಡಗಿವೆ. ಒಂದು ಕಾಲದಲ್ಲಿ ತಮ್ಮ ಭವ್ಯತೆಯಿಂದ ಕಂಗೊಳಿಸದ್ದ ಸಂಗೀತ ಮತ್ತು ಇತರ ಪ್ರದರ್ಶಕ ಕಲೆಗಳ ಔನ್ನತ್ಯವನ್ನು ಮರಳಿ ಪಡೆಯುವುದು. ಇದನ್ನು ಸಾಧಿಸಲು ಆಧುನಿಕ ಮಾದರಿ ಮತ್ತು ಗುರುಕುಲ ಪದ್ಧತಿ ಎರಡೂ ಬಗೆಯನ್ನು ಅನುಸರಿಸಲಾಗಿದೆ. ಆ ದಿಸೆಯಲ್ಲಿ ಉನ್ನತ ಗುರಿಗಳನ್ನು ಸಾಧಿಸುವ ಹಾದಿಯಲ್ಲಿ ವಿಶ್ವವಿದ್ಯಾಲಯ ಈಗಾಗಲೇ ದಿಟ್ಟ ಹೆಜ್ಜೆಗಳನ್ನು ಇಟ್ಟಿದೆ.