ಕುಲಸಚಿವರ ನುಡಿ

ಡಾ.ಟಿ.ಎಸ್.ದೇವರಾಜ
ಕುಲಸಚಿವರ
ಸಂಗೀತಾದಿ ಪ್ರದರ್ಶಕ ಕಲೆಗಳು ನಮ್ಮ ಭಾರತೀಯ ಸಾಂಸ್ಕøತಿಕ ಪರಂಪರೆಯ ಪ್ರಮುಖ ರಾಯಭಾರಿಗಳು. ಇವು ಮನುಕುಲದಷ್ಟೇ ಆರ್ಷೇಯ ಸ್ಥಾನ ಪಡೆದಿದ್ದು, ಆನಂದ ಮತ್ತು ಸೌಹಾರ್ದತೆಗಳನ್ನು ಜೀವಾಳವಾಗಿರಿಸಿ ಕೊಂಡಿವೆ. ಇವುಗಳ ಸಾಹಚರ್ಯದಿಂದ ಮನುಕುಲವು ಸಮೃದ್ಧಿಯತ್ತ ಸಾಗಿ ಮುನ್ನಡೆದಿರುವುದು ಕಂಡು ಬರುತ್ತದೆ. ಇಂದಿನ ವೈಜ್ಞಾನಿಕ ಯುಗದಲ್ಲಿ ಇವುಗಳ ಅಗತ್ಯತೆಯು ಹೆಚ್ಚಾಗಿದ್ದು, ಇಂದು ಇದರ ಪ್ರಸ್ತುತತೆ ಅಧಿಕವಾಗಿದೆ. ಕರ್ನಾಟಕ ರಾಜ್ಯದ ಸಾಂಸ್ಕøತಿಕ ವೈಭವಕ್ಕೆ ಮತ್ತೊಂದು ಮಹೋನ್ನತ ಕೊಡುಗೆಯಾಗಿ ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ 2008-09ನೇ ಸಾಲಿನಲ್ಲಿ ಸ್ಥಾಪನೆಗೊಂಡು, ಜಾಗತೀಕರಣದಿಂದಾದ ಬದಲಾವಣೆಗಳ ಮಹಾಪೂರದ ಈ ಸನ್ನಿವೇಶದಲ್ಲಿ ದೇಶೀಯ ಸಂಸ್ಕøತಿ ಕೊಚ್ಚಿಹೋಗದಂತೆ ಪೋಷಿಸಿ, ಬೆಳೆಸಿ, ಸಂರಕ್ಷಿಸಿ, ಜಾಗತಿಕ ಸಾಂಸ್ಕøತಿಕ ಮಹಾಮೇಳದಲ್ಲಿ ಸಂಗೀತಾದಿ ಪ್ರದರ್ಶಕ ಕಲೆಗಳನ್ನು ಚಿರಸ್ಥಾಯಿಯಾಗಿಸುವ ಇಚ್ಛಾಶಕ್ತಿ, ಬದ್ಧತೆ ಹಾಗೂ ಕಾರ್ಯಕ್ಷಮತೆಗಳೊಂದಿಗೆ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತ ದಶಕದೆಡೆಗೆ ಮುನ್ನಡೆದಿದೆ. ಮಾನವ ಭಾವಾಭಿವ್ಯಕ್ತಿಯ ಮಾಧ್ಯಮವಾದ ಶಾಸ್ತ್ರೀಯ ಸಂಗೀತ, ನೃತ್ಯ, ಜನಪದ ಸಂಗೀತ ಹಾಗೂ ಜೀವನದ ಎಲ್ಲ ಆಗುಹೋಗುಗಳಿಗೆ ಸ್ಪಂದಿಸಿ ಪ್ರತಿಕ್ರಯಿಸುವ ರಂಗಭೂಮಿ ಮತ್ತು ಇವುಗಳಿಗೆ ತಾಯಿ ಬೇರಾದ ಇತರೆ ಕಲೆಪ್ರಕಾರಗಳ ಸಂಗಮವು ಇಲ್ಲಿ ಏರ್ಪಟ್ಟು ಅವುಗಳ ಅನನ್ಯತೆಯನ್ನು ಜಗತ್ತಿಗೆ ಸಾರಲು, ಆ ಮೂಲಕ ಆಧುನಿಕ ಮತ್ತು ಗುರುಕುಲ ಪದ್ದತಿಗಳಲ್ಲಿ ವ್ಯಾಸಂಗ ಮತ್ತು ತರಬೇತಿಗಳನ್ನು ನೀಡುವ ವಿಚಾರಧಾರೆಯನ್ನು ಅಳವಡಿಸಿಕೊಂಡಿದ್ದು, ಆ ಕ್ಷೇತ್ರಗಳಲ್ಲಿನ ಸೃಜನಶೀಲತೆ ಮತ್ತು ಸಂಶೋಧನಾಂಶಗಳನ್ನು ಹೊರತೆಗೆದು, ಅವುಗಳ ಮಹತ್ತನ್ನು ಸಾರುವ ಮಹೋನ್ನತ ಗುರಿಯನ್ನು ಮುಂದುವರಿಸಿಕೊಂಡು ಸಾಗಿದೆ. ಸಂಗೀತ ಮತ್ತು ಪ್ರದರ್ಶಕ ಕಲೆಗಳು ಬದುಕು ಮತ್ತು ಜೀವನೋಪಾಯಕ್ಕೆ ಒದಗುವ ಸವಾಲನ್ನು ಸ್ವೀಕರಿಸಿ ಸಂಗೀತ ಮತ್ತು ಪ್ರದರ್ಶಕ ಕಲೆಗಳನ್ನು ಕಲಿಯುವವರ ಮತ್ತು ಆಸಕ್ತರಿಗೆ ಆಸರೆಯನ್ನೊದಗಿಸುವುದು ಮುಖ್ಯ ಗುರಿಯಾಗಿದೆ. ಹಾಗೆ ಮಾಡುವ ಮೂಲಕ ಈ ವಿದ್ಯೆ ರಾಜ್ಯದಲ್ಲಿ ಮತ್ತು ರಾಷ್ಟ್ರದಲ್ಲಿ ಜ್ಞಾನದ ಮುಖ್ಯ ಪ್ರವಾಹದಲ್ಲಿ ಸಂಗೀತ ಮತ್ತು ಪ್ರದರ್ಶಕ ಕಲೆಗಳು ಸೇರ್ಪಡೆಯಾಗುವುದನ್ನು ಸಾಕ್ಷಾತ್ಕರಿಸುವುದು. ಪಾರಂಪರಿಕ ಕಲೆಗಳು ಮತ್ತು ಕರ್ನಾಟಕದ ಉಳಿದೆಲ್ಲಾ ಅಮೂರ್ತ ಪರಂಪರೆಯ ಜ್ಞಾನ ದ್ರವ್ಯಗಳ ಸಂಗೀತ ಮತ್ತು ಪ್ರದರ್ಶಕ ಕಲೆಗಳು ನಮ್ಮ ಪಾರಂಪರಿಕ ಜ್ಞಾನ ವ್ಯವಸ್ಥೆಯ ಅನಘ್ರ್ಯ ಭಂಡಾರವಾಗಿದೆ. ಹಾಗಾಗಿ, ಶೈಕ್ಷಣಿಕ ಸಂಸ್ಕಾರಕ್ಕೆ ಒಗ್ಗುವ ವಿಶಿಷ್ಟ ಸಾಂಸ್ಕøತಿಕ ಆಯಾಮ ಇವುಗಳಿಗಿರುವುದು ಸರ್ವ ವೇದ್ಯ ಆಧುನಿಕ ದಾಖಲೀಕರಣದ ತಂತ್ರಗಳ ಮೂಲಕ ವಿಶಾಲ ಸಮಾಜದ ಸದಸ್ಯರುಗಳನ್ನು ತಲುಪುವುದು ಜರೂರಿನ ಸಂಗತಿಯಾಗಿದ್ದು ಅದನ್ನು ಆದ್ಯತೆಯ ಮೇರೆಗೆ ಕೈಗೆತ್ತಿಕೊಳ್ಳಬೇಕಾಗಿದೆ. ಈ ಕಲೆಗಳನ್ನು ಪ್ರದರ್ಶನಗಳ ಮೂಲಕ ವಿಶಾಲ ಸಮಾಜಕ್ಕೆ ತಲುಪಿಸುವ ಜರೂರಿರುವುದರಿಂದ ವ್ಯವಸ್ಥಿತವಾದ ಜನಾಂಗೀಯ ಹಾಗೂ ಅಂತರ್-ಸಾಂಸ್ಕøತಿಕ ಅಧ್ಯಯನವೂ ಆಗಬೇಕಾಗಿದೆ. ಈ ಬೃಹತ್ ಯೋಜನೆಯನ್ನು ಸಾಕಾರಗೊಳಿಸಲು ಸಾಧ್ಯವಾಗುವುದು ಒಂದು ವಿಶ್ವವಿದ್ಯಾಲಯದಂಥ ದೊಡ್ಡ ಸಂಸ್ಥೆಗೆ ಮಾತ್ರ. ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದದ್ದು “ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ”. ವಿಶಾಲ ಸಮಾಜದೊಂದಿಗೆ ಈ ಕ್ಷೇತ್ರದ ಪರಿಣಿತರು ನಿರಂತರವಾಗಿ ಸಂವಾದದಲ್ಲಿ ತೊಡಗಿ ಬೌದ್ಧಿಕ ವಿಕಾಸಕ್ಕೆ ನೆರವಾಗಬೇಕೆನ್ನುವ ದೂರದೃಷ್ಟಿಯಿಂದ ಸಂಶೋಧನೆ, ದಾಖಲೀಕರಣ ಮತ್ತು ಸಂರಕ್ಷಣೆ ಮಾಡುವ ಉದ್ಧೇಶದಿಂದಲೆ ನಮ್ಮ ವಿಶ್ವವಿದ್ಯಾಲಯ ಅಸ್ತಿತ್ವಕ್ಕೆ ಬಂದಿದೆ.