ರಾಷ್ಟ್ರೀಯ ಶಿಕ್ಷಣ ನೀತಿ

ರಾಷ್ಟ್ರೀಯ ಶಿಕ್ಷಣ ನೀತಿ:

ಮನುಷ್ಯ ತನ್ನ ಪೂರ್ಣ ಮಾನವ ಸಾಮಥ್ರ್ಯ ಗಳಿಸಿಕೊಳ್ಳಲು, ಸಮಾನತೆಯುಳ್ಳ ಮತ್ತು ನ್ಯಾಯಸಂಗತವಾದ ಸಮಾಜವೊಂದನ್ನು ಅಭಿವೃದ್ಧಿ ಪಡಿಸಲು ಹಾಗೂ ರಾಷ್ಟ್ರದ ಏಳಿಗೆಯನ್ನು ಸಾಧಿಸಲು ಮೂಲಭೂತವಾಗಿ ಶಿಕ್ಷಣ ಅವಶ್ಯಕವಾಗಿದೆ. ಗುಣಾತ್ಮಕವಾದ ಶಿಕ್ಷಣಕ್ಕೆ ಸಾರ್ವತ್ರಿಕ ನೆಲೆಗಟ್ಟಿನಲ್ಲಿ ಅವಕಾಶಗಳ ಬಾಗಿಲು ತೆರೆಯುವುದು ಹಾಗೂ ಆರ್ಥಿಕ ಪ್ರಗತಿ, ಸಾಮಾಜಿಕ ನ್ಯಾಯ, ಮತ್ತು ಸಮಾನತೆ, ವೈಜ್ಞಾನಿಕ ಮುನ್ನಡೆ, ರಾಷ್ಟ್ರೀಯ ಏಕತೆ ಮತ್ತು ಸಾಂಸ್ಕøತಿಕ ಸಂರಕ್ಷಣೆ ಇವುಗಳ ಮೂಲಕ ಜಾಗತಿಕ ಮುಂದಾಳುತನವನ್ನು ಸಾಧಿಸುವುದು ಭಾರತದ ನಿರಂತರ ಮುನ್ನಡೆಯ ಕೀಲಿಕೈ ಆಗಿದೆ. ವ್ಯಕ್ತಿಯ, ಸಮಾಜದ, ದೇಶದ ಹಾಗೂ ಸಮಸ್ತ ಪ್ರಪಂಚದ ಒಳಿತನ್ನು ಸಾಧಿಸಬೇಕಾದರೆ ಸಾರ್ವತ್ರಿಕ ಉನ್ನತ ಶಿಕ್ಷಣದ ಮೂಲಕ ನಮ್ಮ ದೇಶದ ಶ್ರೀಮಂತವಾದ ಕೌಶಲ್ಯಗಳನ್ನು ಮತ್ತು ಸಂಪನ್ಮೂಲಗಳನ್ನು ಅಭಿವೃದ್ಧಿಪಡಿಸಿ ಗರಿಷ್ಠ ಪ್ರಮಾಣದಲ್ಲಿ ಬಳಕೆ ಮಾಡಿಕೊಳ್ಳುವುದು ಅತ್ಯುತ್ತಮ ಮಾರ್ಗವಾಗಿದೆ. ಮುಂದಿನ ದಶಕದ ವೇಳೆಗೆ ಇಡೀ ಪ್ರಪಂಚದಲ್ಲೇ ಗರಿಷ್ಟ ಪ್ರಮಾಣದಲ್ಲಿ ಯುವಜನಾಂಗವನ್ನು ಭಾರತ ಹೊಂದಲಿದ್ದು ಅವರಿಗೆ ಅತ್ಯುನ್ನತವಾದ ಶಿಕ್ಷಣ ಸೌಲಭ್ಯವನ್ನು ನಾವು ಎಷ್ಟರಮಟ್ಟಿಗೆ ಒದಗಿಸಿಕೊಡಬಲ್ಲೆವು ಎಂಬುದರ ಮೇಲೆ ನಾಡಿನ ಭವಿಷ್ಯ ತೀರ್ಮಾನವಾಗಲಿದೆ. ಈ ನಿಟ್ಟಿನಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯು ದೇಶದಾದ್ಯಂತದ ಎಲ್ಲಾ ಶಿಕ್ಷಣ ತಜ್ಞರುಗಳ ಸಲಹೆಗಳನ್ನು ಪರಿಗಣಿಸಿ ಜಾರಿಗೊಂಡಿದೆ.

ಶಿಕ್ಷಣ ವ್ಯವಸ್ಥೆಯ ಉದ್ದೇಶ ಒಳ್ಳೆಯ ಮನುಷ್ಯರನ್ನು ವಿಕಸಿತರನ್ನಾಗಿ ಮಾಡುವುದು. ಈ ಮನುಷ್ಯರು ಸತರ್ಕವಾಗಿ ಆಲೋಚನೆ ಮಾಡಬಲ್ಲವರಾಗಿರಬೇಕು ಹಾಗೂ ಕ್ರಿಯಾಶೀಲರಾಗಿರಬೇಕು. ಅವರಲ್ಲಿ ಮಾನವೀಯತೆ ಮತ್ತು ಸಹಾನುಭೂತಿ, ಧೈರ್ಯ, ಸ್ಥೈರ್ಯಗಳು, ವೈಜ್ಞಾನಿಕ ಮನೋಭಾವ ಮತ್ತು ಸೃಜನಾತ್ಮಕ ಶಕ್ತಿ ವಿಫುಲವಾಗಿರಬೇಕು. ನೈತಿಕ ಚಿಂತನೆ ಮತ್ತು ಮೌಲ್ಯಗಳು ಅವರಲ್ಲಿ ಸಮೃದ್ಧವಾಗಿರಬೇಕು. ನಮ್ಮ ಸಂವಿಧಾನದಲ್ಲಿ ನಮೂದಿಸಲಾಗಿರುವಂತೆ ಸಮಾನವಾದ, ಸಮಾವಿಷ್ಟವಾದ ಹಾಗೂ ಬಹುಳತಾವಾದ ಇವುಗಳನ್ನು ನೆಲೆಗಟ್ಟಾಗಿ ಹೊಂದಿರುವ ತತ್ಪರರಾದ, ಉತ್ಪಾದಕರಾದ, ಹಾಗೂ ಕೊಡುಗೆ ನೀಡಬಲ್ಲಂತಹ ಪ್ರಜೆಗಳನ್ನು ಸಜ್ಜುಗೊಳಿಸುವುದು ನಮ್ಮ ಶಿಕ್ಷಣ ವ್ಯವಸ್ಥೆಯ ಉದ್ದೇಶ.

ಒಂದು ಒಳ್ಳೆಯ ವಿದ್ಯಾಸಂಸ್ಥೆಯೆಂದರೆ ಅದರಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಗೂ ಸ್ವಾಗತವಿರಬೇಕು. ಅದು ವಿದ್ಯಾರ್ಥಿಯ ಯೋಗಕ್ಷೇಮ ನೋಡಿಕೊಳ್ಳುವಂತೆ ಇರಬೇಕು. ಅದರಲ್ಲಿ ಪ್ರಚೋದಕವಾದ ಕಲಿಕೆಯ ವಾತಾವರಣ ಇರಬೇಕು. ಅದರಲ್ಲಿ ವಿಭಿನ್ನ ರೀತಿಯ ಕಲಿಕೆಯ ಅನುಭವಗಳನ್ನು ಪಡೆದು ಕೊಳ್ಳುವಂತಿರಬೇಕು ಹಾಗೂ ಅಂತಹ ಸಂಸ್ಥೆಯಲ್ಲಿ ಸಮಗ್ರ ವಿದ್ಯಾರ್ಥಿವೃಂದಕ್ಕೆ ಉತ್ತಮವಾದ ಕಲಿಕೆಗೆ ಅವಕಾಶ ಮಾಡಿಕೊಡುವ ಒಳ್ಳೆಯ ಮೂಲಸೌಕರ್ಯ ಮತ್ತು ಸೂಕ್ತವಾದ ಸಂಪನ್ಮೂಲಗಳು ಲಭ್ಯವಿರಬೇಕು. ಈ ಗುಣಗಳನ್ನು ಪಡೆದುಕೊಳ್ಳುವುದು ಪ್ರತಿಯೊಂದು ಶಿಕ್ಷಣ ಸಂಸ್ಥೆಯ ಗುರಿಯಾಗಿರಬೇಕು. ಇವುಗಳೊಟ್ಟಿಗೆ ವಿವಿಧ ಬಗೆಯ ಸಂಸ್ಥೆಗಳ ನಡುವೆ ಮಾತ್ರವಲ್ಲದೆ ಒಟ್ಟಾರೆಯಾಗಿ ಶಿಕ್ಷಣದ ಎಲ್ಲಾ ಹಂತಗಳ ನಡುವೆ ಅವ್ಯಾಹತವಾದ ಏಕತೆ, ಸಮಗ್ರತೆ ಮತ್ತು ಸಹಕಾರ ಅತ್ಯಾವಶ್ಯಕವಾಗಿ ಏರ್ಪಡಬೇಕು.

ಶಿಕ್ಷಣ ವ್ಯವಸ್ಥೆಯನ್ನು ಒಟ್ಟಾರೆಯಾಗಿ ನಿರ್ದೇಶಿಸುವ ಹಾಗೂ ಅದರೊಳಗೆ ಕಂಡುಬರುವ ಪ್ರತಿಯೊಂದು ಶಿಕ್ಷಣ ಸಂಸ್ಥೆಗೆ ಮಾರ್ಗದರ್ಶನ ನೀಡುವ ಮೂಲಭೂತ ತತ್ವಗಳು ಈ ಕೆಳಕಂಡಂತೆ ಇವೆ.
ಚಿ. ಪ್ರತಿಯೊಬ್ಬ ವಿದ್ಯಾರ್ಥಿಯ ವಿಶಿಷ್ಟ ಸಾಮಥ್ರ್ಯಗಳನ್ನು ಗುರುತಿಸುವ, ಅವುಗಳಿಗೆ ಮಾನ್ಯತೆ ನೀಡುವ ಹಾಗೂ ಅವುಗಳನ್ನು ಅಚ್ಚುಕಟ್ಟಾಗಿ ಬೆಳೆಸುವ ನಿಟ್ಟಿನಲ್ಲಿ ಅಧ್ಯಾಪಕರು ಮತ್ತು ತಂದೆತಾಯಿಯರು ಕಾರ್ಯತತ್ಪರರಾಗಬೇಕು. ಶೈಕ್ಷಣಿಕ ಹಾಗೂ ಪಠ್ಯೇತರ ಎರಡೂ ಕ್ಷೇತ್ರಗಳಲ್ಲಿ ವಿದ್ಯಾರ್ಥಿಯ ಒಟ್ಟಾರೆ ಬೆಳವಣಿಗೆಯನ್ನು ಪೋಷಿಸುವ ಸಂವೇದನಾಶೀಲತೆಯನ್ನು ಅಧ್ಯಾಪಕರು ಮತ್ತು ತಂದೆತಾಯಿಗಳು ಹೊಂದಿರಬೇಕು.
b. ಕಲೆ ಮತ್ತು ವಿಜ್ಞಾನಗಳ ನಡುವೆ ಪಠ್ಯಸಂಬಂಧವಾದ ಮತ್ತು ಪಠ್ಯೇತರ ಚಟುವಟಿಕೆಗಳ ನಡುವೆ ಶುದ್ಧ ಶೈಕ್ಷಣಿಕ ಮತ್ತು ವೃತ್ತಿಪರ ಶಿಕ್ಷಣದ ಹಾದಿಗಳ ನಡುವೆ ಸ್ಪಷ್ಟವಾದ ಭೇದಗಳು ಇರಕೂಡದು. ಇದರಿಂದಾಗಿ ಕಲಿಕೆಯ ವಿವಿಧ ಕ್ಷೇತ್ರಗಳಲ್ಲಿ ಕಂಡುಬರುವ ತಾರತಮ್ಯ ಭಾವನೆಗಳು ಮತ್ತು ಅಸಂಬದ್ಧತೆಗಳು ನಶಿಸಲು ನೆರವಾಗುತ್ತವೆ.
ಛಿ. ಎಲ್ಲಾ ಜ್ಞಾನಕ್ಷೇತ್ರಗಳ ಏಕತೆ ಮತ್ತು ಸಮಗ್ರತೆಗಳ ಸಲುವಾಗಿ ವಿಜ್ಞಾನಗಳು, ಸಮಾಜ ವಿಜ್ಞಾನಗಳು, ಕಲೆ ಮಾನವಿಕಗಳು ಹಾಗೂ ಕ್ರೀಡೆಗಳು ಇವೆಲ್ಲವನ್ನೂ ಒಟ್ಟುಗೂಡಿಸಿ ಬಹುಶಾಸ್ತ್ರೀಯ ಹಾಗೂ ಸಮಗ್ರತಾ ದೃಷ್ಟಿಯುಳ್ಳ ಶಿಕ್ಷಣ ವಿಧಾನಕ್ಕೆ ಅವಕಾಶ ಮಾಡಿಕೊಡುವುದರ ಮೂಲಕ ಬಹುಶಾಸ್ತ್ರೀಯ ಪ್ರಪಂಚವನ್ನು ಪ್ರವೇಶಿಸಲು ವಿದ್ಯಾರ್ಥಿಗಳಿಗೆ ಅನುವು ಮಾಡಿಕೊಡುವುದು.
ಜ. ತಾರ್ಕಿಕ ತೀರ್ಮಾನಕ್ಕೆ ಅವಕಾಶ ಮಾಡಿಕೊಡುವ ಹಾಗೂ ನವೀನತೆಯನ್ನು ಕಂಡುಕೊಳ್ಳುವ ಸೃಜನಾತ್ಮಕತೆ ಮತ್ತು ತಾರ್ಕಿಕ ಚಿಂತನೆಗಳನ್ನು ಪ್ರೋತ್ಸಾಹಿಸುವುದು.
e. ಬೋಧನೆ ಮತ್ತು ಕಲಿಕೆ ಎರಡರಲ್ಲೂ ಬಹುಭಾಷೀಯತೆ ಮತ್ತು ಭಾಷಾಶಕ್ತಿ ಇವುಗಳಿಗೆ ಪ್ರೋತ್ಸಾಹ ನೀಡುವುದು.
ಜಿ. ಇಂದಿನ ಕೋಚಿಂಗ್ ಸಂಸ್ಕøತಿಯನ್ನು ಬೆಂಬಲಿಸಿ ಪೋಷಿಸುವ ಸಂಕಲಿತ ಮೌಲ್ಯಾಂಕನವನ್ನು (ಸಮ್ಮೇಟಿವ್ ಅಸೆಸ್ಮೆಂಟ್) ದೂರಮಾಡಿ ರೂಪಾತ್ಮಕ ಮೌಲ್ಯಾಂಕನಕ್ಕೆ (ಫಾರ್ಮೇಟಿವ್ ಅಸೆಸ್ಮೆಂಟ್) ದಾರಿ ಮಾಡಿಕೊಡುವುದು.
g. ಬೋಧನೆ ಮತ್ತು ಕಲಿಕೆಯಲ್ಲಿ ವ್ಯಾಪಕವಾಗಿ ತಂತ್ರಜ್ಞಾನದ ಬಳಕೆ ಮಾಡುವುದು. ದಿವ್ಯಾಂಗ ಅಥವಾ ವಿಭಿನ್ನ ಸಾಮಥ್ರ್ಯವುಳ್ಳ ಮಕ್ಕಳಿಗಾಗಿ ಸಾಧನ ಸೌಲಭ್ಯಗಳನ್ನು ಅಧಿಕಗೊಳಿಸುವುದು. ಶೈಕ್ಷಣಿಕ ಯೋಜನೆ ಮತ್ತು ನಿರ್ವಹಣೆಗಳನ್ನು ಅಭಿವೃದ್ಧಿಪಡಿಸುವುದು.
h. ಎಲ್ಲಾ ವಿದ್ಯಾರ್ಥಿಗಳು ಶಿಕ್ಷಣ ವ್ಯವಸ್ಥೆಯಲ್ಲಿ ಯಶಸ್ವಿಯಾಗಿ ಮುಂದುವರೆಯಲು ಸಾಧ್ಯವಾಗುವಂತೆ ಎಲ್ಲ ಬಗೆಯ ಶೈಕ್ಷಣಿಕ ತೀರ್ಮಾನಗಳಲ್ಲಿ ಪೂರ್ಣಸಮಾನತೆ ಮತ್ತು ಸಮಾವರ್ತತೆಗಳನ್ನು ಮೈಲುಗಲ್ಲಾಗಿ ಪರಿಗಣಿಸುವುದು.
i. ಅತ್ಯುತ್ತಮವಾದ ಶಿಕ್ಷಣ ಹಾಗೂ ಬೆಳವಣಿಗೆಗಾಗಿ ಅತ್ಯುತ್ತಮವಾದ ಸಂಶೋಧನೆ ಸಹ ಜೊತೆಯಲ್ಲಿಯೇ ಸಾಗಬೇಕಾದ ಇನ್ನೊಂದು ಅಗತ್ಯ.
ರಿ. ಶಿಕ್ಷಣ ತಜ್ಞರ ಮೂಲಕ ಸುಸ್ಥಿರ ಸಂಶೋಧನೆ ಹಾಗೂ ನಿಯತವಾದ ಮೌಲ್ಯಾಂಕನ ಇವುಗಳನ್ನು ಆಧರಿಸಿದ ಬೆಳವಣಿಗೆಯ ನಿರಂತರ ವಿಮsರ್ಶೆ ಮತ್ತು ಪುನರವಲೋಕನ.
ಞ. ಶಿಕ್ಷಣ ಎನ್ನುವುದು ಒಂದು ಸಾರ್ವಜನಿಕ ಸೇವೆ. ಹಾಗಾಗಿ ಗುಣಾತ್ಮಕವಾದ ಶಿಕ್ಷಣವನ್ನು ಪಡೆದುಕೊಳ್ಳುವುದು ಪ್ರತಿಯೊಂದು ಮಗುವಿನ ಹಕ್ಕು.
ಟ. ಶಕ್ತವಾದ, ಸ್ಪಂದನಶೀಲವಾದ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ತರವಾದ ಸಂಪನ್ಮೂಲ ವಿನಿಯೋಗ ಮಾಡುವುದರ ಜೊತೆಗೆ ನಿಜವಾಗಿಯೂ ಜನಪರ ಕಾಳಜಿ ಹೊಂದಿರುವ, ಖಾಸಗಿಯಾಗಿ ಹಾಗೂ ಸಮುದಾಯಗಳ ಆಶ್ರಯದಲ್ಲಿ ನಡೆಯುವ ಉದಾರ ಮನಸ್ಸಿನ ವಿದ್ಯಾಸಂಸ್ಥೆಗಳಿಗೆ ಪ್ರೋತ್ಸಾಹ ನೀಡುವುದು ಮತ್ತು ಅನುಕೂಲಗಳನ್ನು ಒದಗಿಸಿಕೊಡುವುದು.

ಭಾರತದೇಶವನ್ನು ಸುಸ್ಥಿರವಾಗಿ ಸಮಾನತಾ ಮನೋಧರ್ಮದ ಹಾಗೂ ಸ್ಪಂದನಶೀಲ ಜ್ಞಾನಸಮಾಜವಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಭಾರತೀಯ ಅಸ್ಮಿತೆಯ ಮೇಲೆ ಆಧಾರಗೊಂಡಿರುವ ಶಿಕ್ಷಣ ವ್ಯವಸ್ಥೆಯೊಂದನ್ನು ಸಾಕಾರಗೊಳಿಸುವುದು ಈ ರಾಷ್ಟ್ರೀಯ ಶಿಕ್ಷಣ ನೀತಿಯ ಮಹಾನ್ ಉದ್ದೇಶವಾಗಿದೆ. ಪ್ರತಿಯೊಬ್ಬರಿಗೂ ಉನ್ನತ ಮಟ್ಟದ ಶಿಕ್ಷಣ ದೊರಕಿಸಿಕೊಡುವುದರ ಮೂಲಕ ಭಾರತವನ್ನು ಜ್ಞಾನದಿಗಂತದ ಒಂದು ಮಹಾನ್ ಶಕ್ತಿಯಾಗಿ ಪರಿವರ್ತಿಸುವ ಮೂಲಕ ಈ ಕನಸನ್ನು ನನಸಾಗಿಸಬಹುದು. ಈ ದಿಸೆಯಲ್ಲಿ ನಮ್ಮ ಸಂಸ್ಥೆಗಳ ಶಿಕ್ಷಣಕ್ರಮ ಮತ್ತು ಬೋಧನಕ್ರಮಗಳು ವಿದ್ಯಾರ್ಥಿಗಳಲ್ಲಿ ಮೂಲಭೂತ ಕರ್ತವ್ಯಗಳು ಮತ್ತು ಸಂವಿಧಾನಾತ್ಮಕ ಮೌಲ್ಯಗಳು ಇವುಗಳ ಬಗೆಗೆ ಆಳವಾದ ಗೌರವಾದರಗಳನ್ನು ಹುಟ್ಟುಹಾಕುವಂತಾಗಬೇಕೆನ್ನುವ ಗುರಿಯನ್ನು ಈ ಶಿಕ್ಷಣ ನೀತಿ ಹೊಂದಿದೆ. ಬದಲಾಗುತ್ತಿರುವ ಪ್ರಪಂಚದಲ್ಲಿ ರಾಷ್ಟ್ರವ್ಯಾಪಿಯಾಗಿ ಬೆಸುಗೆಗೊಂಡು ವಿದ್ಯಾರ್ಥಿಗಳು ತಮ್ಮ ಪಾತ್ರದ ಹಾಗೂ ಜವಾಬ್ದಾರಿಗಳ ವಿಚಾರವಾಗಿ ಪ್ರಜ್ಞಾಪೂರ್ವಕವಾದ ಅರಿವನ್ನು ಪಡೆದು ಕೊಂಡಿರಬೇಕೆಂಬುದು ಪ್ರಸಕ್ತ ನೀತಿಯ ಆಶಯವಾಗಿದೆ. ಈ ನೀತಿಯ ದೂರದರ್ಶಿತ್ವದ ಇನ್ನೊಂದು ಅಂಶವೆಂದರೆ ಇದು ಕೇವಲ ಆಲೋಚನೆಯಲ್ಲಿ ಮಾತ್ರವಲ್ಲದೆ ಭಾವ, ಬುದ್ಧಿ ಹಾಗೂ ಕ್ರಿಯೆಗಳಲ್ಲಿ ನಾವು ಭಾರತೀಯರು ಎಂಬ ಆಳವಾದ ಹೆಮ್ಮೆಯ ಭಾವನೆಯನ್ನು ವಿದ್ಯಾರ್ಥಿಗಳಲ್ಲಿ ಮೂಡಿಸಬೇಕಲ್ಲದೆ ಅದರಲ್ಲಿ ನಿಜವಾಗಿಯೂ ಜಾಗತಿಕ ಪ್ರಜೆಗೆ ಅಗತ್ಯವಾದ ಜ್ಞಾನ, ಕೌಶಲಗಳು, ಮೌಲ್ಯಗಳು ಹಾಗೂ ನಿಲುವುಗಳನ್ನು ರೂಢಿಸಬೇಕಾಗಿದೆ. ಈ ನಿಲುವುಗಳು ಮಾನವ ಹಕ್ಕುಗಳು, ಸುಸ್ಥಿರ ಬೆಳವಣಿಗೆ ಮತ್ತು ಬದುಕು ಹಾಗೂ ವಿಶ್ವಕಲ್ಯಾಣ ಇವುಗಳಿಗೆ ನಾಂದಿ ಹಾಡುವ ಮೂಲಕ ವಿಶ್ವಪ್ರಜೆಯ ವರ್ಚಸ್ಸನ್ನು ಮೂಡಿಸಬೇಕಾಗಿದೆ.

ಭಾರತವು ಅನೇಕ ಸಂಸ್ಕøತಿಗಳ ಸಂಗೀತ, ನೃತ್ಯ, ನಾಟಕ ಮುಂತಾದ ಪ್ರದರ್ಶಕ ಕಲೆಗಳನ್ನು ಒಳಗೊಂಡ ಲಲಿತಕಲೆಗಳ ಒಂದು ಬೃಹತ್ ದೇಶ. ಈ ಕಲೆಗಳು ರಾಷ್ಟ್ರ, ಧರ್ಮ ಮತ್ತು ಸಂಪ್ರದಾಯವನ್ನು ಪ್ರತಿನಿಧಿಸುತ್ತವೆ. ಹಿಂದೆ ಗುರುಕುಲ ವ್ಯವಸ್ಥೆಯಲ್ಲಿ ಕಲಿಸಲಾಗುತ್ತಿದ್ದ ಇಂತಹ ಕಲೆಗಳನ್ನು ಒಂದು ಶೈಕ್ಷಣಿಕ ಚೌಕಟ್ಟಿಗೆ ಒಳಪಡಿಸುವ ಪ್ರಯತ್ನಗಳು ಪ್ರಸ್ತುತ ಅವಧಿಯಲ್ಲಿ ನಡೆಯುತ್ತಿದೆ. ಸಂಶೋಧನೆಯ ಕಡೆಗೆ ಅನಾವರಣಗೊಳಿಸುವಲ್ಲಿಯೂ ಸಹ ಅನೇಕ ಪ್ರಯತ್ನಗಳು ನಡೆಯುತ್ತಿವೆ. ಭಾರತದಲ್ಲಿ ಹೀಗೆ ಪ್ರದರ್ಶಕ ಕಲೆಗಳನ್ನು ಬೆಳೆಸುವಲ್ಲಿ ಮತ್ತು ಸಾಂಸ್ಕøತಿಕ ರಾಯಭಾರಿಗಳಾಗಿ ಕೆಲಸ ಮಾಡುವ ನಿರ್ದಿಷ್ಟ ವಿಶ್ವವಿದ್ಯಾಲಯಗಳು ಸ್ಥಾಪಿಸಲ್ಪಟ್ಟಿವೆ. ಅವುಗಳಲ್ಲಿ ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ಪ್ರದರ್ಶಕ ಕಲೆಗಳನ್ನು ಉಳಿಸಿ ಬೆಳೆಸುವಲ್ಲಿ ಒಂದು ಮುಖ್ಯ ಪಾತ್ರ ವಹಿಸುತ್ತಿವೆ.