ವಿಶ್ವವಿದ್ಯಾನಿಲಯ ಬಗೆಗೆ

ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ಮೈಸೂರು. ದಿನಾಂಕ; 17 ಸೆಪ್ಟೆಂಬರ್ 2009 ರಲ್ಲಿ ಸ್ಥಾಪನೆಯಾಯಿತು. ರಾಜ್ಯಪಾಲರ ಅನುಮೋದನೆಯನ್ನು ಪಡೆದ 59ನೇ ಸ್ವತಂತ್ರ ಭಾರತದ ಸಂವಿಧಾನದ ಕಾಯಿದೆ ಸಂಖ್ಯೆ 25, ವರ್ಗ(3) ಪರಿಚ್ಛೇದ 348, ರಂತೆ ಕಾರ್ಯನಿರ್ವಹಿಸುತ್ತಿದೆ.


ಈ ವಿಶ್ವವಿದ್ಯಾಲಯವು ವಿಶೇಷವಾದ, ಭಾರತದ ಎರಡನೆಯ ಹಾಗೂ ದಕ್ಷಿಣ ಭಾರತದಲ್ಲೇ ಪ್ರಥಮ ಪ್ರದರ್ಶಕ ಕಲೆಗಳಿಗಾಗಿಯೇ ಸ್ಥಾಪಿಸಲ್ಪಟ್ಟ ವಿಶ್ವವಿದ್ಯಾಲಯವಾಗಿದೆ. ಸಂಗೀತಾದಿ ಪ್ರದರ್ಶಕ ಕಲೆಗಳು ನಮ್ಮ ಭಾರತೀಯ ಸಾಂಸ್ಕøತಿಕ ಪರಂಪರೆಯ ಪ್ರಮುಖ ರಾಯಭಾರಿಗಳು. ಇವು ಮನುಕುಲದಷ್ಟೇ ಆರ್ಷೇಯ ಸ್ಥಾನ ಪಡೆದಿದ್ದು, ಆನಂದ ಮತ್ತು ಸೌಹಾರ್ದತೆಗಳನ್ನು ಜೀವಾಳವಾಗಿರಿಸಿ ಕೊಂಡಿವೆ. ಇವುಗಳ ಸಾಹಚರ್ಯದಿಂದ ಮನುಕುಲವು ಸಮೃದ್ಧಿಯತ್ತ ಸಾಗಿ ಮುನ್ನಡೆದಿರುವುದು ಕಂಡು ಬರುತ್ತದೆ. ಇಂದಿನ ವೈಜ್ಞಾನಿಕ ಯುಗದಲ್ಲಿ ಇವುಗಳ ಅಗತ್ಯತೆಯು ಹೆಚ್ಚಾಗಿದ್ದು ಇಂದು ಇದರ ಪ್ರಸ್ತುತತೆ ಅಧಿಕವಾಗಿದೆ.


ವಿಶ್ವವಿದ್ಯಾಲಯವು ಪ್ರದರ್ಶಕ ಕಲೆಗಳ ಸಾಂಪ್ರದಾಯಿಕ ಪದ್ಧತಿಯನ್ನು ಸಂರಕ್ಷಿಸುವುದರೊಂದಿಗೆ ಆಧುನಿಕ ತಂತ್ರಜ್ಞಾನವನ್ನು, ವೈಜ್ಞಾನಿಕ ನೆಲೆಗಟ್ಟುಗಳನ್ನು, ತನ್ನಲ್ಲಿ ಅಳವಡಿಸಿಕೊಂಡು ಸಂಗೀತ ಮತ್ತು ಪ್ರದರ್ಶಕ ಕಲೆಗಳ ಒಂದು ಪೂರಕ ವಾತಾವರಣವನ್ನು ಸೃಜಿಸುವತ್ತ ಮುನ್ನಡೆದಿದೆ. ಅಲ್ಲದೇ ಸರ್ಟಿಫಿಕೇಟ್ ಕೋರ್ಸ್, ಡಿಪ್ಲೊಮಾ, ಪದವಿ ಮತ್ತು ಸ್ನಾತಕೋತ್ತರ ಪದವಿಗಳಂತಹ ಶೈಕ್ಷಣಿಕ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದೆ.

ವಿಶ್ವವಿದ್ಯಾಲಯದ ಲಾಂಛನ ಮತ್ತು ಧ್ಯೇಯವಾಕ್ಯ:

ಸಂಗೀತ, ನೃತ್ಯ ಮತ್ತು ನಾಟಕ ವಿಭಾಗಗಳನ್ನು ತನ್ನ ಮುಖ್ಯ ಪಠ್ಯಕ್ಕಾಗಿ ಇಟ್ಟುಕೊಂಡಿರುವ ಹಾಗೂ ಇವುಗಳ ಎಲ್ಲಾ ಜ್ಞಾತಿ ವಿದ್ಯೆಗಳನ್ನು ತನ್ನ ತೆಕ್ಕೆಯೊಳಗೆ ಹುದುಗಿಸಿ ಕೊಂಡಿರುವ ವಿಶ್ವವಿದ್ಯಾಲಯದ ಲಾಂಛನವನ್ನು ಅದಕ್ಕನುಗುಣವಾಗಿಯೇ ಚಿತ್ರಿಸಲಾಗಿದೆ. ಸುಂದರ, ಸರಳ ಹಾಗೂ ಚಿತ್ರಮಯ ರೇಖೆಗಳನ್ನು ಹೊಂದಿಕೊಂಡು ಸಂಗೀತದ ಆಧಾರ ಸ್ವರವಾದ ಷಡ್ಜವನ್ನು ಸಂಕೇತಿಸುವ ನವಿಲು (ಇದು ನಮ್ಮ ರಾಷ್ಟ್ರಪಕ್ಷಿಯೂ ಹೌದು) ಶ್ರುತಿವಾದ್ಯವಾದ ತಂಬೂರಿಯನ್ನು ತನ್ನ ಸಪ್ತಸ್ವರ ಸಂಕೇತವಾದ ರೆಕ್ಕೆಗಳಿಂದ ಬಳಸಿದೆ.ಅದರ ಪಾದರಚನೆಯು ನಾಟ್ಯವನ್ನು ಸಂಕೇತಿಸುತ್ತದೆ. ನಾಡೋಜ ಪ್ರೊ.ದೇಜಗೌ ಅವರು ಸೂಚಿಸಿರುವ ರಾಷ್ಟ್ರಕವಿ ಶ್ರೀ ಕುವೆಂಪುರವರ ಕವಿತೆಯ ಒಂದು ವಾಕ್ಯಪದ ವಿಶ್ವವಿದ್ಯಾಲಯದ ಧ್ಯೇಯವಾಕ್ಯವಾಗಿರುವ ಪಟ್ಟಿಯು ಒಂದು ರಂಗದಂತಿದ್ದು ಅದು ನಾಟಕರಂಗವನ್ನು ಸಂಕೇತಿಸುತ್ತದೆ.
“ಅನಾದಿಗಾನಮೀ ವಿಶ್ವಂ”:
ಇದು ನಮ್ಮ ವಿಶ್ವವಿದ್ಯಾಲಯದ ಧ್ಯೇಯವಾಕ್ಯವಾಗಿದ್ದು, ಈ ವಿಶ್ವವೆಲ್ಲಾ ಕಲಾಮಯವಾಗಿ ಅನಾದಿಗಾನದಂತೆ ಗೋಚರವಾಗುತ್ತಿದೆ ಎಂದು ಸಾರಿ ಹೇಳುತ್ತದೆ.


ವಿ.ವಿಯ ಸರ್ವತೋಮುಖ ಅಭಿವೃದ್ಧಿಗಾಗಿ ಕ್ರಮಗಳು:

  1. ಎಲ್ಲಾ ಆಯಾಮಗಳ ಮೂಲಕ ಪ್ರವೇಶಾತಿ ದಾಖಲಾತಿ ಅನುಪಾತದ ಹೆಚ್ಚಳಕ್ಕೆ ಕಾರ್ಯರೂಪಿಸುವುದರ
  2. ಮೂಲಕ ಅಭಿವೃದ್ಧಿ ಪಡಿಸುವುದು.
  3. ಸುಧಾರಿತ ಹಾಗೂ ಉತ್ತಮ ಗುಣಮಟ್ಟದ ಶೈಕ್ಷಣಿಕ ಕಾರ್ಯ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವುದು.
  4. ವಿ.ವಿ ಯಲ್ಲಿ ತಂತ್ರಜ್ಞಾನದ ಸೂಕ್ತ ಅಳವಡಿಕೆ.
  5. ಬೋಧಕರು ಹಾಗೂ ವಿದ್ಯಾರ್ಥಿಗಳ ಅಭಿವೃದ್ಧಿಗಾಗಿ ಕೌಶಲ್ಯ ತರಬೇತಿ ಕಾರ್ಯಯೋಜನೆಗಳು.
  6. ಭಾರತೀಯ ಭಾಷೆಗಳ ಮೂಲಕ ಸಮೃದ್ಧ ಸಂಸ್ಕøತಿ ಮತ್ತು ಪರಂಪರೆಗೆ ಪ್ರೋತ್ಸಾಹ ನೀಡುವುದು.
  7. ಹೊಸ ಸ್ನಾತಕೋತ್ತರ ಕೇಂದ್ರಗಳ ಸ್ಥಾಪನೆ, ಪ್ರಸ್ತುತ ವಿ.ವಿಯ ಕಟ್ಟಡ ಹಾಗೂ ಮೂಲ ಸೌಕರ್ಯದ ಅಭಿವೃದ್ಧಿ ಹಾಗೂ ಪ್ರದರ್ಶನ ಮತ್ತು ಕೊಠಡಿಗಳ ನಿರ್ಮಾಣಕ್ಕೆ ಕ್ರಮಗಳು.
  8. ಆದರ್ಶ ಹಾಗೂ ಪಾರದರ್ಶಕತೆಯ ಕಛೇರಿ ಮತ್ತು ವಿಭಾಗಗಳ ಆಡಳಿತಕ್ಕೆ ಆದ್ಯತೆ.
  9. ವಿ.ವಿಯ ಶೈಕ್ಷಣಿಕ ಹಾಗೂ ಆಡಳಿತಾತ್ಮಕ ಕಾರ್ಯಯೋಜನೆಗಳ ಅಭಿವೃದ್ಧಿಗೆ ಆದ್ಯತೆ.
  10. ಉನ್ನತ ಶಿಕ್ಷಣದ ಗುಣಮಟ್ಟಕ್ಕೆ ಪ್ರಾಮುಖ್ಯತೆ ಕೊಡುವ ಉತ್ತಮ ಕಾರ್ಯಯೋಜನೆಗಳನ್ನು ರೂಪಿಸಿಕೊಳ್ಳುವುದು.
  11. ಉನ್ನತ ಶಿಕ್ಷಣಕ್ಕಾಗಿ ಅತ್ಯುತ್ತಮ ಅಭ್ಯಾಸ ಕಾರ್ಯಾಗಾರಗಳ ಯೋಜನೆ.
  12. ಕುಂದುಕೊರತೆಗಳ ಪರಿಹಾರ ಕಾರ್ಯೋನ್ಮುಖ ಘಟಕದ ಅಳವಡಿಕೆ ಹಾಗೂ ಕಾರ್ಯ ವಿಧಾನಗಳು.
  13. ವಿಶ್ವವಿದ್ಯಾಲಯವು ಪರಿಣಾಮಕಾರಿ ಸಂಪನ್ಮೂಲಗಳ ಬಳಕೆ ಹಾಗೂ ನಿಯೋಜನಾ ಅಭಿವೃದ್ಧಿಯ ತಂತ್ರಗಳನ್ನು ಅಳವಡಿಸಿಕೊಂಡಿದೆ.
  14. ವಿ.ವಿಯ ಆರ್ಥಿಕ ವ್ಯವಸ್ಥೆಯನ್ನು ನ್ಯಾಯಾಂಗ ಸಮ್ಮತವಾಗಿ ಹಾಗೂ ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಗಿದೆ. ಆಯವ್ಯಯ ಪತ್ರ ಹಾಗೂ ಲೆಕ್ಕ ಪರಿಶೋಧನಾ ಕಾರ್ಯಗಳು ಪ್ರತೀ ವರ್ಷದಲ್ಲೂ ವ್ಯವಸ್ಥಿತವಾಗಿ ನಡೆಯುತ್ತಿರುತ್ತದೆ.
  15. ಸಂಗೀತ ಮತ್ತು ಪ್ರದರ್ಶಕ ಕಲೆಗಳಿಗೆ ಸಂಬಂಧಿಸಿದ ವಸ್ತು ಸಂಗ್ರಹಾಲಯ ಹಾಗೂ ಡಿಜಿಟಲ್ ಗ್ರಂಥಾಲಯಗಳನ್ನು ನಿರ್ಮಿಸುವುದು.
  16. ವಿಶ್ವವಿದ್ಯಾಲಯದ ಎಲ್ಲಾ ವಿಭಾಗಗಳ ಸಂಗೀತ ಮತ್ತು ಪ್ರದರ್ಶಕ ಕಲೆಗಳಿಗೆ ಸಂಬಂಧಪಟ್ಟ ಹಸ್ತಪ್ರತಿಗಳನ್ನು ಡಿಜಿಟಲೈಸ್ ಹಾಗೂ ಗಣಕೀಕೃತಗೊಳಿಸುವುದು.
  17. ಅತ್ಯುತ್ತಮ ತಂತ್ರಜ್ಞಾನವನ್ನು ಒಳಗೊಂಡ ದೃಶ್ಯ-ಶ್ರವ್ಯ ಸ್ಟುಡಿಯೋಗಳನ್ನು ಸ್ಥಾಪಿಸುವುದು.
  18. ಅನೇಕ ಪ್ರದರ್ಶಕ ಕಲೆಗಳಿಗೆ ಸಂಬಂಧಪಟ್ಟ ಸಂಘ ಸಂಸ್ಥೆಗಳನ್ನು ವಿಶ್ವವಿದ್ಯಾಲಯದ ಒಡಂಬಡಿಕೆಗೆ ಅನುವು ಮಾಡುವುದು.
  19. ವಿದ್ಯಾರ್ಥಿಗಳ ಸಾಂಸ್ಕøತಿಕ ವಿನಿಮಯಕ್ಕೆ ಪ್ರೋತ್ಸಾಹ ನೀಡುವುದು.
  20. ದೇಶದ ಅತ್ಯುನ್ನತ ಹೆಸರಾಂತ, ಸಂಗೀತ ಮತ್ತು ಪ್ರದರ್ಶಕ ಕಲಾವಿದರ ಉಪನ್ಯಾಸಗಳು, ಕಚೇರಿ ಪ್ರದರ್ಶನಗಳನ್ನು ದಾಖಲೀಕರಿಸುವುದು.